1.

ಆಹಾರ ಪೋಲಾಗುವುದನ್ನು ತಡೆಯುವ ಮಾರ್ಗಗಳು ಯಾವುದು?​

Answer» <html><body><p>ಜಾಗತಿಕ ಆರೋಗ್ಯಕ್ಕಾಗಿ ಪೌಷ್ಠಿಕಾಂಶಗಳ ಭದ್ರತೆ’ ಬಗ್ಗೆ ಕಾರ್ಯಾಗಾರ ಹಾಗೂ ‘ಕೇಕ್ ಮತ್ತು ಬೇಕರಿ ಪದಾರ್ಥಗಳ ಪ್ರದರ್ಶನ ಹಾಗೂ ಮಾರಾಟ’ ಕಾರ್ಯಕ್ರಮ ಜಿಕೆವಿಕೆಯಲ್ಲಿ ಜರುಗಿತು</p><p></p><p>‘ಜಾಗತಿಕ ಆರೋಗ್ಯಕ್ಕಾಗಿ ಪೌಷ್ಠಿಕಾಂಶಗಳ ಭದ್ರತೆ’ ಬಗ್ಗೆ ಕಾರ್ಯಗಾರ ಹಾಗೂ ‘ಕೇಕ್ ಮತ್ತು ಬೇಕರಿ ಪದಾರ್ಥಗಳ ಪ್ರದರ್ಶನ ಹಾಗೂ ಮಾರಾಟ’ ಕಾರ್ಯಕ್ರಮ ಇತ್ತೀಚೆಗೆ ಜಿಕೆವಿಕೆಯಲ್ಲಿ ಜರುಗಿತು. ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ವಿಸ್ತರಣಾ ನಿರ್ದೇಶನಾಲಯ ಮತ್ತು ಬೇಕರಿ ತರಬೇತಿ ಕೇಂದ್ರ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಉದ್ಘಾಟಿಸಿದರು.</p><p></p><p>ಉತ್ತಮ ಆರೋಗ್ಯಕ್ಕಾಗಿ ಪೌಷ್ಠಿಕಾಂಶವುಳ್ಳ ಸಮತೋಲನ ಆಹಾರ ಸೇವನೆ ಅನಿವಾರ್ಯ. ಉತ್ತಮ ಆಹಾರ ಪಡೆಯಲು ಉತ್ತಮ ಬೆಳೆ ಅವಶ್ಯಕ. ಉತ್ತಮ ಬೆಳೆ ಬೆಳೆಯಲು ಉತ್ತಮ ಮಣ್ಣು ಅನಿವಾರ್ಯ. ಮಣ್ಣನ್ನು ಸಮರ್ಪಕ ರೀತಿಯಲ್ಲಿ ಉಳಿಸಿ, ಮುಂದಿನ ಪೀಳಿಗೆಗೂ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ಸಚಿವರು ಹೇಳಿದರು.</p><p></p><p>ದೇಶದಲ್ಲಿ ಏಕದಳ ಧಾನ್ಯಗಳಲ್ಲಿ ಶೇ <a href="https://interviewquestions.tuteehub.com/tag/10-261113" style="font-weight:bold;" target="_blank" title="Click to know more about 10">10</a>, ಹಣ್ಣು ಮತ್ತು ತರಕಾರಿಗಳಲ್ಲಿ ಶೇ30 ರಷ್ಟು ನಷ್ಟವಾಗುತ್ತಿದೆ. ಇದರ ಪ್ರಮಾಣ ಹಾಲಿನಲ್ಲಿ ಶೇಕಡಾ ಒಂದಕ್ಕಿಂತ ಕಡಿಮೆ. ಉತ್ತಮವಲ್ಲದ ರಸ್ತೆ, ದಾಸ್ತಾನು ಮಳಿಗೆಗಳು ಮತ್ತು ಶೈತ್ಯಗಾರಗಳ ಕೊರತೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಪೋಲಾಗುತ್ತಿದೆ. ಇದನ್ನು ಮನಗಂಡು ಸರ್ಕಾರ ಹಳ್ಳಿಗಳಲ್ಲಿ ಉತ್ತಮ ದಾಸ್ತಾನು ಮಳಿಗೆಗಳನ್ನು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸಲು ಉತ್ತಮ ಗ್ರಾಮೀಣ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದೆ ಎಂದರು.</p><p></p><p>ಸಾರ್ವಜನಿಕ ಸಮಾರಂಭಗಳಲ್ಲಿ ಆಹಾರದ ಮಹತ್ವವನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡುವುದು ಅವಶ್ಯಕವಾಗಿದೆ. ಮದುವೆ ಮುಂತಾದ ಸಮಾರಂಭಗಳಲ್ಲಿ ಉಳಿದ ಆಹಾರವನ್ನು ಬಡವರಿಗೆ ಮತ್ತು ಅವಶ್ಯಕವಿರುವವರಿಗೆ ನೀಡುವಂತಾಗಲು ಮೊಬೈಲ್ ಆ್ಯಪ್‌ಗೆ ಮಾಹಿತಿ ನೀಡುವುದು ಅವಶ್ಯಕ. ಇದರ ಬಗ್ಗೆ ಜಾಗೃತಿ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.</p><p></p><p>ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ರಾಜೇಂದ್ರಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಅಪೌಷ್ಠಿಕತೆ ಹೆಚ್ಚಿನ ಪ್ರಮಾಣದಲ್ಲಿದ್ದು ಇದನ್ನು ಹೋಗಲಾಡಿಸುವುದು ಅನಿವಾರ್ಯವೆಂದು ಅಭಿಪ್ರಾಯಪಟ್ಟರು. ಈ ದಿಶೆಯಲ್ಲಿ ಬೆಂಗಳೂರು ಕೃಷಿ ವಿವಿ ಭತ್ತದಲ್ಲಿ ಪೌಷ್ಠಿಕ ತಳಿಗಳನ್ನು ಬಿಡುಗಡೆ ಮಾಡಿದೆ. ಕಡಿಮೆ ಖರ್ಚಿನಲ್ಲಿ ಉತ್ತಮ ಆಹಾರವನ್ನು ಪಡೆಯುವ ವಿಧಾನಗಳ ಬಗ್ಗೆ ಸಂಶೋಧನೆ ಕೈಗೊಂಡು ರಾಗಿ, ಸೋಯಾ ಅವರೆ ಮತ್ತು ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಕಾರ್ಯಕ್ರಮದಲ್ಲಿ ವಿವಿಧ ಅಲಂಕಾರಿಕ ಕೇಕ್‌ಗಳು, ಬೇಕರಿ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ಡಾ. ಎಂ.ಎಸ್. ನಟರಾಜು, ವಿಸ್ತರಣಾ ನಿರ್ದೇಶಕರು, ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. ಬೆಂಗಳೂರಿನ ಪ್ರತಿಷ್ಠಿತ ಬೇಕರಿ ಮತ್ತು ಆಹಾರ ಮೌಲ್ಯವರ್ಧನೆ ಸಂಸ್ಥೆಗಳು ಭಾಗವಹಿಸಿದ್ದವು. </p></body></html>


Discussion

No Comment Found

Related InterviewSolutions