InterviewSolution
| 1. |
Essay about on environment in kannada |
|
Answer» ಹೌದು... ನಿಜಕ್ಕೂ ಈ ಪ್ರಕೃತಿ ಎಷ್ಟು ಸುಂದರವಾಗಿದೆಯಲ್ಲವೇ? ಸಮುದ್ರ ತೀರದಲ್ಲೋ ಅಥವಾ ಹಸಿರು ಮರಗಳ ನಡುವೆ ಕುಳಿತುಕೊಂಡಾಗ ನಮ್ಮ ಮನಸ್ಸಲ್ಲಿ ಶಾಂತಿ, ಪ್ರೀತಿಯ ಭಾವನೆಗಳು ಆವರಿಸಿಕೊಂಡಿರುತ್ತದೆ. ಆದರೆ ನಾವು ತಂತ್ರಜ್ಞಾನದ ಗಾಲಿಗೆ ಸಿಕ್ಕಿ ಮುಂದೆ ಉರಿಳಿದಂತೆ ಪ್ರಕೃತಿಯೊಡಗಿನ ಬಾಂಧವ್ಯ ಕಡಿಮೆ ಮಾಡಿಕೊಳ್ಳುತ್ತೊದ್ದೇವೆ. ನಗರದವರ ಕತೆ ಬಿಡಿ, ಹಳ್ಳಿಯ ಯುವಕರಿಗೂ ಅದು ಯಾವ ಮರ? ಇದು ಯಾವ ಜಾತಿಯ ಬಳ್ಳಿ ಎಂಬ ಸಾಮಾನ್ಯ ಜ್ಞಾನವು ಕಡಿಮೆಯಾಗುತ್ತಿದೆ. ಸುತ್ತಲಿನ ವಸ್ತುಗಳನ್ನು ತಿಳಿದುಕೊಳ್ಳಲು ಯಾವ ಕೃಷಿ ಕಾಲೇಜಿನಲ್ಲಿ ಡಿಗ್ರಿ ಪಡೆಯಬೇಕಾಗಿಲ್ಲ. ಮಲೆನಾಡಿನ ವಾಸಿಯಾದ ನಾನು ಪ್ರಶ್ನೆ ಮಾಡುವ ಚಟವನ್ನು ಬೆಳೆಸಿಕೊಂಡಿದ್ದೇನೆ. ಅಪ್ಪ-ಅಮ್ಮನ ಜತೆ ತೋಟಕ್ಕೆ ಹೋದರೆ ಆ ಮರ ಯಾವುದು? ಈ ಗಿಡ ಯಾವುದು ಎಂದು ಪ್ರಶ್ನೆ ಮಾಡುತ್ತಲೇ ಇರುತ್ತೇನೆ. ಆದರೆ ಇಂದಿನ ಪೀಳಿಗೆಯಲ್ಲಿ ಈ ತಿಳಿದುಕೊಳ್ಳುವ ಗುಣ ಯಾಕೆ ಮರೆಯಾಗಿದೆ? ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ.[ಈ ವಿಶ್ವದಲ್ಲಿ ಬದುಕಲು ಇಚ್ಛೆ ಇದ್ದರೆ ಈ ಟಿಪ್ಸ್ ಪಾಲಿಸಿ] |
|