

InterviewSolution
Saved Bookmarks
1. |
Essay on air foce of India In kannada |
Answer» <html><body><p>ಚರಿತ್ರೆ ೧೯೩೨ ರಲ್ಲಿ ಅಸ್ತಿತ್ವಕ್ಕೆ ಬಂದ ವಾಯುಸೇನೆಯ ನಂ.೧ ಸ್ಕ್ವಾಡ್ರನ್ ೧೯೩೩ ರಲ್ಲಿ ಕರಾಚಿಯಲ್ಲಿ ಕಾರ್ಯಸ್ಥಿತಿಗೆ ಬಂದಿತು. ಆಗ ಇದ್ದದ್ದು ಕೇವಲ ಐದು ಪೈಲಟ್ ಗಳು! ಕೇವಲ ನಾಲ್ಕು ವಪೀಟೀ ವಿಮಾನಗಳನ್ನು ಹೊಂದಿದ್ದ ವಾಯುಸೇನೆ ಇಂದು ೨೦೦೦ ಕ್ಕೂ ಹೆಚ್ಚು ಯುದ್ಧವಿಮಾನಗಳನ್ನು ಹೊಂದಿದೆ. ಮೊದಲ ಪೈಲಟ್ ಗಳು ಭಾರತೀಯ ವಾಯುಸೇನೆಯ ಮೊದಲ ಐದು ಪೈಲಟ್‍ಗಳು ಹೆ ಸಿ ಸರ್ಕಾರ್, ಸುಬ್ರೊತೊ ಮುಖರ್ಜೀ, ಭೂಪೇಂದ್ರ ಸಿಂಗ್, ಎ ಬ್ ಅವನ್ ಮತ್ತು ಅಮರ್ಜೀತ್ ಸಿಂಗ್. ೧೯೩೩ ರಲ್ಲಿ ಸೇರಿದ ಈ ಐವರಲ್ಲಿ ಭೂಪೇಂದ್ರ ಸಿಂಗ್ ಮತ್ತು ಅಮರ್ಜೀತ್ ಸಿಂಗ್ ವಿಮಾನ ಅಪಘಾತಗಳಲ್ಲಿ ಮೃತರಾದರು. ಸರ್ಕಾರ್ ಒಂದು ವರ್ಷದೊಳಗೇ ವಾಯುಸೇನೆಯನ್ನು ಬಿಟ್ಟರು. ಎ ಬಿ ಅವನ್ ಭಾರತದ ವಿಂಗಡಣೆಯ ನಂತರ ಪಾಕಿಸ್ತಾನವನ್ನು ಸೇರುವುದಾಗಿ ನಿರ್ಧರಿಸಿದರು. ಸುಬ್ರೊತೊ ಮುಖರ್ಜಿ ಮುಂದೆ ಭಾರತೀಯ ಸೇನೆಯ ಮೊದಲ ಮುಖ್ಯಸ್ಥರಾದರು. ಎರಡನೆಯ ಮಹಾಯುದ್ಧದ ಮೊದಲು ಇನ್ನಷ್ಟು ವಿಮಾನಗಳು ಮತ್ತು ಪೈಲಟ್‍ಗಳು ವಾಯುಸೇನೆಯನ್ನು ಸೇರಿದರು. ಎರಡನೇ ಮಹಾಯುದ್ಧ ಭಾರತೀಯ ಸೈನ್ಯ ಎರಡನೇ ಮಹಾಯುದ್ಧದಲ್ಲಿ ಅತಿ ದೊಡ್ಡ ಸ್ವಯಂಸೇವಕ ಪಡೆ ಎಂಬುದು ಹೆಚ್ಚು ಜನರಿಗೆ ತಿಳಿದಿಲ್ಲ. ಒಟ್ಟು ೨ ಕೋಟಿ ಭಾರತೀಯ ಸೈನಿಕರು ಪಾಲ್ಗೊಂಡ ಈ ಯುದ್ಧದಲ್ಲಿ ಭಾರತೀಯ ವಾಯುಸೇನೆಯೂ ಪಾಲ್ಗೊಂಡಿತು. ೧೯೪೭-೪೮ ಕಾಶ್ಮೀರ ಯುದ್ಧ ಅಕ್ಟೋಬರ್ ೨೦, ೧೯೪೭ ರಲ್ಲಿ ಪಾಕಿಸ್ತಾನದಿಂದ ಸಹಾಯ ಪಡೆದ ಪಠಾಣರ ದಳವೊಂದು ಕಾಶ್ಮೀರದೊಳಕ್ಕೆ ನುಗ್ಗಿತು. ಕಾಶ್ಮೀರದ ಮಹಾರಾಜರಾದ ಹರಿ ಸಿಂಗ್ ಭಾರತದ ಸಹಾಯ ಕೋರಿದರು. ಕಾಶ್ಮೀರ ಭಾರತಕ್ಕೆ ಸೇರಬೇಕೆಂಬ ಶರತ್ತಿನ ಸಹಾಯ ನೀಡಿದ ಭಾರತ, ವಾಯುಸೇನಯ ವಿಮಾನಗಳ ಮೂಲಕ ತನ್ನ ಸೈನಿಕರನ್ನು ಕಾಶ್ಮೀರಕ್ಕೆ ಸಾಗಿಸಿತು. ಡಿಸಂಬರ್ ೩೧, ೧೯೪೮ ರಲ್ಲಿ ಈ ಯುದ್ಧ ಕೊನೆಗೊಂಡಿತು. ವಾಯುಸೇನೆ ನೇರವಾಗಿ ಯುದ್ಧದಲ್ಲಿ ಪಾಲ್ಗೊಳ್ಳುವ ಸಂದರ್ಭ ಈ ಯುದ್ಧದಲ್ಲಿ ಉಂಟಾಗಲಿಲ್ಲ. ೧೯೬೧ ಕಾಂಗೋ ಜೂನ್ ೩೦, ೧೯೬೦ ರಲ್ಲಿ ಕಾಂಗೋ ದೇಶದ ಮೇಲಿನ ಬೆಲ್ಜಿಯಮ್ ನ ಆಡಳಿತ ಹಠಾತ್ತಾಗಿ ಕೊನೆಗೊಂಡಿತು. ಆಗ ಅಲ್ಲಿ ಶಾಂತಿ ನಿರ್ವಹಣಾ ಕಾರ್ಯಕ್ಕೆ ವಿಶ್ವಸಂಸ್ಥೆ ಸಹಾಯವನ್ನು ಕೋರಿತು. ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಭಾರತೀಯ ವಾಯುಸೇನೆಯ ವಿಮಾನಗಳು ಮತ್ತು ಸೈನಿಕರನ್ನು ಒದಗಿಸಿದರು. ಕೆನ್ಬೆರ್ರಾ ಯುದ್ಧವಿಮಾನ ಈ ಕಾಲದಲ್ಲಿ ಉಪಯೋಗಿತವಾಯಿತು. ವಾಯು ಸೇನೆ ಮುಖ್ಯಸ್ಥರು <a href="https://interviewquestions.tuteehub.com/tag/31-306830" style="font-weight:bold;" target="_blank" title="Click to know more about 31">31</a> <a href="https://interviewquestions.tuteehub.com/tag/dec-435584" style="font-weight:bold;" target="_blank" title="Click to know more about DEC">DEC</a>, <a href="https://interviewquestions.tuteehub.com/tag/2016-291244" style="font-weight:bold;" target="_blank" title="Click to know more about 2016">2016</a> ವಾಯುಪಡೆಯ ಮುಖ್ಯಸ್ಥರಾಗಿ ಬೀರೇಂದರ್ ಸಿಂಗ್ ಧನೋವಾ ಅವರು 31 Dec, 2016 ಶನಿವಾರ ಅಧಿಕಾರ ಸ್ವೀಕರಿಸಿದರು. ಬಿಪಿನ್ ಅವರು ಸೇನೆಯ 27ನೇ ಮುಖ್ಯಸ್ಥರಾಗಿದ್ದರೆ, ಧನೋವಾ ಅವರು ವಾಯುಪಡೆಯ 25ನೇ ಮುಖ್ಯಸ್ಥರಾಗಿದ್ದಾರೆExplanation:</p></body></html> | |