InterviewSolution
Saved Bookmarks
| 1. |
Essay on habits in kannda |
|
Answer» ಬಿಡುವಿನ ವೇಳೆಯಲ್ಲಿ ಆಸಕ್ತಿಯಿಂದ ಮಾಡುವಂಥ, ಮನೋಲ್ಲಾಸ ನೀಡುವಹಾಗೂ ಲಾಭದಾಯಕವಾಗುವಂಥದು ಹವ್ಯಾಸ. ಆಸಕ್ತಿ ಕೆರಳಿಸುವ ಯಾವುದೇ ಸಂದರ್ಭ ಅಥವಾ ಸನ್ನಿವೇಶ ಉತ್ತಮ ಹವ್ಯಾಸಕ್ಕೆ ಎಡೆ ಮಾಡಬಹುದು. ಹುಟ್ಟಿದ ಹಬ್ಬ ಅಥವಾ ಹೊಸ ವರ್ಷಕ್ಕೆಂದು ಬಂದ ಕಾಣಿಕೆ, ಸಾಗರ ತೀರ ಪ್ರದೇಶದಲ್ಲಿರುವ ಸುಂದರ ಚಿಪ್ಪುಗಳು, ವಸ್ತುಪ್ರದರ್ಶನದಲ್ಲಿರುವ ವಿಮಾನಗಳ ಮಾದರಿ-ಇವುಗಳನ್ನು ಪಡೆದವನಿಗೆ, ಕಂಡವನಿಗೆ, ಸಂಬಂಧಿಸಿದ ಹವ್ಯಾಸದಲ್ಲಿ ಆಸಕ್ತಿ ಉಂಟಾಗಬಹುದು. ಅಂಚೆ ಚೀಟಿ ಸಂಗ್ರಹ, ನಾಣ್ಯ ಸಂಗ್ರಹ, ಹಡಗು-ವಿಮಾನಗಳ ಮಾದರಿ ತಯಾರಿ, ಮರಗೆಲಸ-ಇಂಥದೇ ಹವ್ಯಾಸ ತಮಗೆ ಒಗ್ಗುತ್ತದೆಂದು ನಿರ್ಧರಿಸಿದ ಮೇಲೆ, ಹಿರಿಯರ ಅನುಮತಿ ಪಡೆದು ಅದನ್ನು ಮುಂದುವರಿಸಬಹುದು. |
|