| 1. |
Kannada essay on garden |
|
Answer» ಹೂವು ಚೆಲುವೆಲ್ಲ ತನ್ನದೆನ್ನಿತು, ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಳು - ಎಂಬ ಹಾಡನ್ನು ನಾವೆಲ್ಲರು ಗುನುಗುನಿಸಿರುತ್ತೇವೆ. ದೇವರು ನಮ್ಮ ಭೂಮಿಯ ಮೇಲೆ ಸೃಷ್ಟಿಸಿದ ಸೌಂದರ್ಯ ರಾಶಿಗಳಲ್ಲಿ ಹೂವಿಗೆ ಅಗ್ರ ಸ್ಥಾನ ನೀಡಬೇಕು. ಇಂತಹ ಹೂವಿನ ಮೋಹದ ಪಾಶಕ್ಕೆ ಸಿಲುಕದವರು ಯಾರಿದ್ದಾರೆ ಹೇಳಿ. ಅಂತಹ ಹೂವುಗಳನ್ನು ಅದರಲ್ಲು ನಮ್ಮ ಪ್ರೀತಿ ಪಾತ್ರ ಹೂವುಗಳನ್ನು ನಮ್ಮದೇ ಆದ ಗಾರ್ಡನ್‌ನಲ್ಲಿ ಬೆಳೆಯಲು ಅವಕಾಶ ಸಿಕ್ಕುತ್ತದೆ ಎಂದರೆ ಯಾರು ತಾನೆ ಬೇಡ ಎನ್ನುತ್ತಾರೆ. ಹೀಗೆ ಮಾಡುವುದು ಒಂದು ಒಳ್ಳೆಯ ಹವ್ಯಾಸ, ಇದರಿಂದ ನಿಮ್ಮನ್ನು ನೀವು ಚಟುವಟಿಕೆಯಿಂದ ಇರಿಸಿಕೊಳ್ಳಬಹುದು. ಜೊತೆಗೆ ಹೆಚ್ಚಾಗಿ ಬೆಳೆದಲ್ಲಿ ಅದರಿಂದ ಸ್ವಲ್ಪ ಹಣವನ್ನು ಸಹ ಸಂಪಾದಿಸಬಹುದು. ನಿಮಗೆ ಹೂವುಗಳನ್ನು ಬೆಳೆಯಲು ಸ್ಥಳಾವಕಾಶ ಎಷ್ಟಿದೆ ಎಂಬುದು ಇಲ್ಲಿ ಪ್ರಶ್ನೆಯೇ ಅಲ್ಲ. ಇರುವುದನ್ನೇ ಸೃಜನಶೀಲತೆಯಿಂದ ಬಳಸಿಕೊಳ್ಳಿ. ಅನುಭವಿ ಗಾರ್ಡನ್ ಪರಿಣತರು ಇರುವ ಸ್ಥಳದಲ್ಲಿಯೇ ತಮ್ಮ ಲಾಭವನ್ನು ಕಾಣುತ್ತಿದ್ದಾರೆ. ಜೊತೆಗೆ ತಮ್ಮ ಗಾರ್ಡನ್ ಅನ್ನು ಸರಿಯಾಗಿ ನಿರ್ವಹಣೆ ಸಹ ಮಾಡುತ್ತಾರೆ. ಆದರೆ ಇದೀಗ ತಾನೆ ಈ ಹವ್ಯಾಸದ ಕ್ಷೇತ್ರಕ್ಕೆ ಕಾಲಿರಿಸಿತ್ತಿರುವ ನಿಮಗೆ ಕೆಲವೊಂದು ಮೂಲ ಮತ್ತು ಆರಂಭಿಕ ಪಾಠಗಳ ಅಗತ್ಯವಿದೆ. ಏಕೆಂದರೆ ಈ ಆರಂಭಿಕ ವಿಷಯಗಳೆ ನಿಮ್ಮ ಮುಂದಿನ ಯಶಸ್ಸಿಗೆ ದಾರಿ ದೀಪವಾಗುತ್ತವೆ. ಈ ಪಾಠಗಳು ನಿಮ್ಮ ಲ್ಯಾಂಡ್ ಸ್ಕೇಪ್ ಹೇಗಿರಬೇಕು ಎಂಬುದರಿಂದ ಹಿಡಿದು ಯಾವ ಯಾವ ಋತುಗಳಲ್ಲಿ ಹೂವುಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ವರೆಗೆ ವ್ಯಾಪಿಸಿರುತ್ತವೆ. ಇದರ ಜೊತೆಗೆ ನೀವು ನಿಮ್ಮ ಕನಸಿನ ಗಾರ್ಡನ್ ಅನ್ನು ಸಾಕಾರ ಮಾಡಿಕೊಳ್ಳಲು ಬಹಳಷ್ಟು ವೈಜ್ಞಾನಿಕ ಜ್ಞಾನವನ್ನು ಮತ್ತು ಸೃಜನಶೀಲತೆಯನ್ನು ಬಳಸಬೇಕಾಗುತ್ತದೆ. ಕಾಸು ಖರ್ಚಿಲ್ಲದೆ ಕೈತೋಟದಲ್ಲಿಯೇ ಬೆಳೆಸಿ ಕೊತ್ತಂಬರಿ ಗಿಡ! ದೊಡ್ಡ ಮಟ್ಟದಲ್ಲಿ ಹೂವುಗಳನ್ನು ಬೆಳೆಯಲು ಆರಂಭಿಸುವ ಮೊದಲು ಸಣ್ಣ ಮಟ್ಟದ ಪ್ರಯತ್ನವನ್ನು ಮಾಡಿ, ಅದರಲ್ಲಿ ಸಾಧಾಕ ಭಾದಕಗಳ ಅರಿವು ನಿಮಗೆ ಲಭಿಸಿದ ನಂತರ, ಹಂತ ಹಂತವಾಗಿ ಹೂವುಗಳ ಬೆಳೆಯನ್ನು ಹೆಚ್ಚಿಸಿ. ಇದರಿಂದ ಪ್ರಕೃತಿಯು ನಿಮ್ಮ ಮನೆಯಲ್ಲಿ ಸುಂದರವಾಗಿ ನೆಲೆಸಿದಂತೆ ಕಾಣುವುದರ ಜೊತೆಗೆ, ಸಂಪಾದನೆಯು ಸಹ ಲಭಿಸಬಹುದು. ಈ ಅಂಕಣದಲ್ಲಿ ನಿಮ್ಮ ಹಾಗೆ ಹೂವುಗಳನ್ನು ಬೆಳೆಯಲು ಆರಂಭಿಸುತ್ತಿರುವವರಿಗಾಗಿ ಕೆಲವೊಂದು ಸಲಹೆಗಳನ್ನು ನೀಡಿದ್ದೇವೆ. ಇದನ್ನು ಓದಿ ನಿಮ್ಮ ಹವ್ಯಾಸವನ್ನು ಆರಂಭಿಸಿ, ಸಂಭವನೀಯ ತಪ್ಪುಗಳಾಗುವುದನ್ನು ತಪ್ಪಿಸಿ. ಬನ್ನಿ ಆ ಸಲಹೆಗಳು ಯಾವುವು ಎಂದು ನೋಡೋಣ... ಗಾರ್ಡನ್ ಮಾಡಲು ಉತ್ತಮವಾದ ಸ್ಥಳದ ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಅವಶ್ಯಕ. ಈ ಸ್ಥಳದಲ್ಲಿ ಹೂ ಗಿಡಗಳು ಬೆಳೆಯಲು, ಅವಶ್ಯಕವಾದ ಮಣ್ಣು, ನೀರು, ಬೆಳಕು ಎಲ್ಲವೂ ಸಹ ಲಭ್ಯವಿರಬೇಕು. ಹೂಗಿಡಗಳು ಕೆಲವೊಂದು ಎತ್ತರವಾಗಿ ಬೆಳೆಯುತ್ತವೆ, ಆ ಎತ್ತರಕ್ಕೆ ಧಕ್ಕೆ ಬರದಂತೆ ಇರುವ ಸ್ಥಳವು ಇದ್ದಲ್ಲಿ ಒಳ್ಳೆಯದು. ಅಷ್ಟೇ ಅಲ್ಲ, ಇಲ್ಲಿ ಬೆಳದ ಹೂವುಗಳು ನಿಮಗೆ ಸುಂದರವಾಗಿ ಕಾಣಬೇಕು ಎಂಬುದನ್ನು ಮರೆಯಬೇಡಿ. ಏಕೆಂದರೆ ಈ ಸೌಂದರ್ಯವೆ ನಿಮ್ಮ ಪ್ರೇರೇಪಣೆಯಾಗಿ ಅವುಗಳ ಹಾರೈಕೆಯನ್ನು ಇನ್ನಷ್ಟು ಚೆನ್ನಾಗಿ ಮಾಡುತ್ತೀರಿ ಅದಕ್ಕೆ. |
|