InterviewSolution
| 1. |
ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಪ್ರಬಂಧ ಬರೆಯಿರಿ |
Answer» ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆಪ್ರಸ್ತಾವನೆ : ಪ್ರಾಚ್ಯ ಸ್ಮಾರಕಗಳು ನಮ್ಮ ದೇಶದ ಆಸ್ತಿ. ಇದನ್ನು ಸಂರಕ್ಷಿಬೇಕಾದುದು ನಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿದೆ. 'ಪ್ರಾಚ್ಯ' ಎಂದರೆ ಪುರಾತನ, ಸ್ಮಾರಕಗಳು ಎಂದರೆ ಹಿಂದಿನ ರಾಜ ಮಹಾರಾಜರ ಕಾಲದ ಭವ್ಯ ಕಟ್ಟಡಗಳು, ಯುದ್ಧ ಸಾಮಾಗ್ರಿಗಳು, ನಾಣ್ಯಗಳು, ದೇವಾಲಯಗಳು, ಮಸೀದಿಗಳು, ಚರ್ಚೆಗಳು, ಅರಮನೆಗಳು, ಉಗ್ರಾಣಗಳು, ಸಾಂಸ್ಕೃತಿಕ ಹಬ್ಬಗಳು ಮುಂತಾದವುಗಳು, ಮೂರ್ತಿಗಳು ಇವುಗಳನ್ನೆಲ್ಲ ನಾವು ಪ್ರಾಚೀನ ಸ್ಮಾರಕಗಳು ಎನ್ನಬಹುದು. ಇವು ಇಂದು ಕೆಲವು ಭೂಗತವಾಗಿದೆ. ಕೆಲವು ಖಂಡತುಂಡಗಳಾಗಿವೆ. ಆ ಕಾಲದ ಹಿಂದಿನ ರಾಜಕೀಯ ವೈಭವ, ಸಾಂಸ್ಕೃತಿಕತೆ ಸಾಮಾಜಿಕ, ಆರ್ಥಿಕ ಬೆಳವಣಿಗೆ ಇವೆಲ್ಲವನ್ನು ಅಭ್ಯಸಿಸಲು ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆ ಅಂತ್ಯ ಎಂಬುದು ಅರಿವಾಗುತ್ತದೆ. ವಿವರಣೆ : ವಿಜಯನಗರ ಸಾಮ್ರಾಜ್ಯವನ್ನು ಅಭ್ಯಸಿಸಲು ಆಧಾರವಾಗಿರುವ ಹಲವಾರು ಇತಿಹಾಸದ ಪುಸ್ತಕಗಳು ಲಭ್ಯವಿದ್ದರೂ ಅದಕ್ಕೆ ಆಧಾರವಾಗಿರುವುದು ಪ್ರಾಜ್ಯ ಸ್ಮಾರಕಗಳು, ಇಂದಿಗೂ ಹಂಪಿಯಲ್ಲಿನ ಕಮಲಮಹಲ್, ಮಹಾನವಮಿ ದಿಬ್ಬ, ದಾಸೋಹದ ಸ್ಥಳಗಳು, ಉದಾಹರಿಸಬಹುದು. ಬೇಲೂರು – ಹಳೇಬೀಡಿನ ವಾಸ್ತು ಶಿಲ್ಪ, ಸುಂದರ ಮೂರ್ತಿಗಳು ಇದಕ್ಕೆ ಸಾಕ್ಷಿಯಾಗಿವೆ. ತಾಜಮಹಲ್ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಶ್ರೀರಂಗಪಟ್ಟಣದ ದರಿಯ ಕಾಲದ ಭಾಗದಲ್ಲಿ ಹೈದರ್, ಟಿಪ್ಪುಗಳ ಸಮಾಧಿಗಳ ಜೊತೆಗೆ ಅಂದಿನ ಅರಸರು ಉಪಯೋಗಿಸುತ್ತಿದ್ದ ಯುದ್ಧೋಪಕರಣಗಳು, ನಾಣ್ಯಗಳು ಉಡುಪುಗಳು ಇಂದಿಗೂ ಸಾಕ್ಷಿಯಾಗಿವೆ. ಉಪಸಂಹಾರ : ನಾವು ನಮ್ಮ ದೇಶದ ಪ್ರಾಚ್ಯ ಸ್ಮಾರಕಗಳನ್ನು ಸಂರಕ್ಷಿಸಬೇಕು. ಈ ಪ್ರಾಚ್ಯ ವಸ್ತುಗಳು ನಮಗೆ ಮಾರ್ಗದರ್ಶನವು, ಒಳ್ಳೆಯ ಸಲಹೆ ಸಂದೇಶಗಳನ್ನು ನೀಡುತ್ತವೆ. ಅಷ್ಟೇ ಅಲ್ಲದೆ ಇವು ನಮ್ಮ ದೇಶದ ಆಸ್ತಿಯಾಗಿದ್ದು, ಇದನ್ನು ಸಂರಕ್ಷಿಸಿ ಕೊಟ್ಟು ಬೇಕಾದುದು ನಮ್ಮ ಆದ್ಯ ಕರ್ತವ್ಯವು ಆಗಿದೆ. ಇಲ್ಲದಿದ್ದರೆ ಅಮೂಲ್ಯವಾದ ಕೊಹಿನೂರ್ ವಜ್ರ ಪರಕೀಯರ ಪಾಲದಂತೆ ಒಂದೊಂದಾಗಿ ಎಲ್ಲವನ್ನು ಕಳೆದುಕೊಳ್ಳುಬೇಕಾಗಬಹುದು. |
|